spot_img
Homeಅಪರಾಧ (CRIME)ಪತ್ನಿಯ ಅಕ್ರಮ ಸಂಬಂಧಕ್ಕೆ ಗಂಡನ ಹತ್ಯೆ: ಅರ್ಚಕನ ಕ್ರೂರ ಕೊಲೆ ಬಹಿರಂಗ

ಪತ್ನಿಯ ಅಕ್ರಮ ಸಂಬಂಧಕ್ಕೆ ಗಂಡನ ಹತ್ಯೆ: ಅರ್ಚಕನ ಕ್ರೂರ ಕೊಲೆ ಬಹಿರಂಗ

ರಾತ್ರಿ ಮನೆಗೆ ಬರದಿದ್ದಾಗ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮರಳಗಾಲದ ಬಳಿಯ ಸಿಡಿಎಸ್ ನಾಲೆ ದಡದ ಮೇಲೆ ಅರ್ಚಕ ಸಿದ್ದಲಿಂಗಪ್ಪ ಧರಿಸುತ್ತಿದ್ದ ಚಪ್ಪಲಿ ಸಿಕ್ಕಿತ್ತು ಮತ್ತು ರಕ್ತದ ಕಲೆಗಳು ಕಾಣಿಸಿದ್ದವು.

ಮರುದಿನ ಬೆಳಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ನಾಲೆಯಲ್ಲಿ ಸಿದ್ದಲಿಂಗಪ್ಪ ಶವ ಮತ್ತು ಅವರ ಬೈಕ್ ಸಿಕ್ಕಿತ್ತು. ಆರಂಭದಲ್ಲಿ ಅಪಘಾತವಾಗಿ ನಾಲೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಆದ್ರೆ ಪೊಲೀಸರಿಗೆ ಮಾತ್ರ ಇದೊಂದು ಪಕ್ಕಾ ಮರ್ಡರ್ ಎಂಬ ಅನುಮಾನ ಬಂದಿತ್ತು. ಅನುಮಾನದ ಮೇಲೆ ಅರ್ಚಕನ ಪತ್ನಿ ಶಾಲಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಪಲ್ಲಂಗದಾಟ ಬೆಳಕಿಗೆ ಬಂದಿದೆ.

ಮರಳಗಾಲ ಗ್ರಾಮದ ನಿವಾಸಿಯಾಗಿರುವ ಹರೀಶ್ ಎಂಬಾತನೊಂದಿಗೆ ಶಾಲಿನಿಗೆ ಅಕ್ರಮ ಸಂಬಂಧವಿತ್ತು. ಮನೆಯಲ್ಲಿ ಗಂಡ, ಮುದ್ದಾದ ಇಬ್ಬರು ಮಕ್ಕಳಿದ್ರೂ ಚಂಚಲೆ ಶಾಲಿನಿ ಮನಸ್ಸು ಮಾತ್ರ ಹರೀಶ್‌ನ ಮೇಲಿತ್ತು. ಸುಮಾರು ಒಂದೂವರೆ ವರ್ಷದ ಹಿಂದೆ ಹರೀಶ್‌ನ ಜೊತೆಯಲ್ಲಿರುವಾಗಲೇ ಪತ್ನಿ ಶಾಲಿನಿಯನ್ನು ಗಂಡ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದರು. ಮಕ್ಕಳಿಗಾಗಿ ಶಾಲಿನಿ ತಪ್ಪು ಕ್ಷಮಿಸಿ, ಆತನಿಂದ ದೂರವಿರುವಂತೆ ಹೇಳಿದ್ದರು.

ತಪ್ಪು ತಿದ್ದಿಕೊಳ್ಳದ ಶಾಲಿನಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಮುಗಿಸಲು ಖತರ್ನಾಕ್ ಪ್ಲಾನ್ ಮಾಡಿದ್ದಳು. ಮೇ 6ರ ಶುಕ್ರವಾರ ಗಂಡ ಪೂಜೆ ತೆರಳುತ್ತಿದ್ದಂತೆ ಪ್ರಿಯಕರ ಹರೀಶ್‌ನಿಗೆ ಶಾಲಿನಿ ವಿಷಯ ತಿಳಿಸಿದ್ದಳು. ಸಿದ್ದಲಿಂಗಪ್ಪನ ದಿನಚರಿ ತಿಳಿದುಕೊಂಡಿದ್ದ ರಾತ್ರಿ ಸುಮಾರು 9 ಗಂಟೆಗೆ ಸಿಡಿಎಸ್ ನಾಲೆ ಬಳಿ ಇಬ್ಬರು ಸ್ನೇಹಿತರೊಂದಿಗೆ ಅರ್ಚಕನನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ ಸಿದ್ದಲಿಂಗಪ್ಪ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ನಂತರ ಶವವನ್ನು ಬೈಕ್ ಸಮೇತ ನಾಲೆಗೆ ಎಸೆದು ಪರಾರಿಯಾಗಿದ್ದರು. ಇದೀಗ ಶಾಲಿನಿ ಮತ್ತು ಹರೀಶ್ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಮಾರ್ಚ್ 7ರಂದು ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಪೊಲೀಸರು ಹಾಗೂ ಜಿಲ್ಲಾ ಎಸ್ಪಿ ಶೋಭಾರಾಣಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲಿಸಿದ್ದರು. ಪ್ರಕರಣದ ತನಿಖೆ ಹಾಗೂ ಆರೋಪಿ ಪತ್ತೆಗಾಗಿ ತನಿಖಾಧಿಕಾರಿಗಳ ತಂಡ ರಚಿಸಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here