spot_img
Homeರಾಣೇಬೆನ್ನೂರರೇಣುಕರ ಯುಗಮಾನೋತ್ಸವ.

ರೇಣುಕರ ಯುಗಮಾನೋತ್ಸವ.

ರಾಣೆಬೆನ್ನೂರು: ಜಗದ್ಗುರು ರೇಣುಕರು ತಮ್ಮ ಜೀವನವನ್ನು ಬರಿ ಧಾರ್ಮಿಕ ಕ್ರಾಂತಿಗೆ ಮೀಸಲಿಡದೇ ಸಾಮಾಜಿಕ ಕ್ರಾಂತಿಗೆ ಪರಿವರ್ತಿಸಿದರು. ಆಚಾರ ವಿಚಾರಗಳ ಸಮನ್ವಯ ಸಂಗಮದಂತಿರುವ ವೀರಶೈವ ಧರ್ಮ ಸಂಸ್ಥಾಪನೆಯ ಕೀರ್ತಿ ಆದಿಜಗದ್ಗುರು ಶ್ರೀರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದು ದಾವಣಗೆರೆ ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು

ಇಲ್ಲಿನ ದೊಡ್ಡಪೇಟೆಯ ಪಟ್ಟಣಶೆಟ್ಟಿ ಅವರ ಓಣಿಯ ರಂಭಾಪುರಿ ಶಾಖಾ ಹಿರೇಮಠದಲ್ಲಿ ಭಾನುವಾರ ತಾಲ್ಲೂಕು ಜಂಗಮ ಸಮಾಜ ಹಾಗೂ ಜಂಗಮ ನೌಕರರ ವೇದಿಕೆ, ಜಂಗಮ ಜ್ಯೋತಿ ಮಹಿಳಾ ಘಟಕದಿಂದ ಏರ್ಪಡಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿನಿಮಾ
ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದವರು ಜಗದ್ಗುರು ರೇಣುಕಾಚಾರ್ಯರು. ಅವರು ಮಾಡಿದ ಪವಾಡ ತೋರಿದ ಲೀಲೆಗಳು ಅನಂತವಾಗಿವೆ ಎಂದರು.
ಜಂಗಮ ಸಮಾಜದ ಅಧ್ಯಕ್ಷ ವಿ.ಎಸ್.ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಂಗಮಜ್ಯೋತಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಬೂದಿಹಾಳಮಠ, ಜಗದೀಶ ಅಜೋಡಿಮಠ, ಶೋಭಾ ದೇವಗಿರಿಮಠ, ಜಗದೀಶ ಮಳೇಮಠ, ವಿದ್ಯಾವತಿ, ಪ್ರೊ.ಎಸ್.ವಿ. ಉಜೈನಿಮಠ, ಎಸ್.ಸಿ.ಷಡಾಕ್ಷರಿಮಠ, ಎಸ್.ವಿ.ಸಾಲೀಮಠ, ಫಕ್ಕೀರೇಶ ಭಸ್ಮಾಂಗಿಮಠ, ಸುವರ್ಣಾ ಅಕ್ಕಿಮಠ, ಚೆನ್ನಮ್ಮ ಗುರುಪಾದದೇವರಮಠ, ಡಾ.ರಾಚೋಟಿಮಠ, ಚನ್ನಬಸಯ್ಯ ಪ್ರಸಾದಿಮಠ, ಪಂಚಯ್ಯ ಮಠ ಇದ್ದರು.

ಜಗದ್ಗುರು ಪಂಚಾಚಾರ್ಯ ಶಿಲಾಮೂರ್ತಿಗಳಿಗೆ ರುದ್ರಾಭಿಷೇಕ, ಹೂಗಳ ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಬಸವಣ್ಣೆಪ್ಪ ಆಟವಾಳಗಿ ಸಹೋದರರು ಪುರುವಂತಿಕೆ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here